
ನಿಮ್ಮ ಸಣ್ಣ ಮುಗುಳು ನಗೆಯಲ್ಲಿ
ಪ್ರೀತಿಯನ್ನು ನೋಡಲು ಕಲಿತ ಈ ಮನ,
ಅದರ ಹಿಂದಿದ್ದ ನೋವನ್ನು
ಸಹಿಸಿಕೊಳ್ಳಲು ಏಕೆ ಕಲಿಯಲಿಲ್ಲ???
ನನ್ನನ್ನೇ ನಾನು ಮರೆಯುವಷ್ಟು
ನಿಮ್ಮ ಪ್ರೀತಿಸಲು ಕಲಿತ ಈ ಹೃದಯ,
ನಿಮ್ಮ ಮರೆಯುವ ಕನಸನ್ನೂ ಏಕೆ ಕಾಣಲಿಲ್ಲ???
ಈ ನ್ನನ್ನೆಲ್ಲ ಹುಚ್ಚು ಪ್ರಶ್ನೆಗಳಿಗೆ
ನೀವೆಂದು ಉತ್ತರಿಸುವುದಿಲ್ಲ ಎಂದು ತಿಳಿದಿದ್ದರೂ,
ನಿಮ್ಮ ಆ ಮೌನ ದಲ್ಲೇ ನನ್ನ ಒಲವನ್ನು
ನಿರೀಕ್ಷಿಸುತ್ತಾ ಪ್ರಶ್ನೇಯನ್ನೇ ಏಕೆ ಮರೆತೆ???
ಏಕೆಂದರೆ ನನಸಾಗದ ಕನಸಿಗೆ
ಹಗಲಲ್ಲೂ ಕನಸು ಕಾಣುತ್ತಿರುವ ಪೇದ್ದಿ ನಾನು................
@ಪೂರ್ಣಿಮಾ,
ReplyDeleteಕನಸುಗಳು ಭ್ರಮೆಯೆಂದು ಭಾವಿಸಬೇಕಿಲ್ಲ|ಕೈಗೆಟುಕದ ದ್ರಾಕ್ಷಿ ಹುಳಿ ಎಂದ ಕಥೆ ಸೋಮಾರಿ ಪ್ರಾಣಿಯದ್ದು ಆದರೆ ಅದನ್ನು ಎಟುಕಿಸಿ ದಕ್ಕಿಸಿಕೊಂಡದ್ದು ಇಚ್ಚಾಶಕ್ತಿಯದ್ದು.. ಕಾಲ ಯಾವುದಕ್ಕೂ ಕಾಯಲಾರದು ಹಾಗೆ ಕಾಲವನ್ನು ಯಾರೂ ಕಾಯಲು ಸಾಧ್ಯವಿಲ. ಎಲ್ಲಾ ಪ್ರಶ್ನೆಗಳಿಗೂ ಉತ್ತರವಿರುತ್ತೆ ಆದರೆ ಅದು ಬೇರೆ ಬೇರೆ ವಿಧದಲ್ಲಿ ಪ್ರಕಟಗೊಳ್ಳಬಹುದಷ್ಟೆ.. ಹತಾಷೆ, ಅಸಹನೆ ಬದುಕು ಕಟ್ಟಲಾರದು, ಉತ್ಸಾಹದ ಚಿಲುಮೆ ಕೊನರಿದ ಕನಸನ್ನು ಚಿಗುರಿಸಬಲ್ಲದಲ್ಲವೇ ?