Wednesday, September 7, 2011

ಹುಡುಗಿರಂದ್ರೆ


ಚೆಂದಕಿಂತ ಚೆಂದ ನೀನೆ ಸುಂದರ ನಿನ್ನ ನೋಡ ಬಂದ ಬಾನ ಚಂದಿರ............. ಯಾಕೆ ಹೀಗೆ.ಈ ಹುಡುಗಿಯರಲ್ಲಿ ಅಂಥದ್ದೇನಿದೆ ? ಇರುವ ಹುಡುಗಿಯರೆಲ್ಲರೂ ಸುರ ಸುಂದರಿಯರೋ ? ಖಂಡಿತ ಅಲ್ಲ ಮಾರಾಯ್ರೆ. ಸೌಂದರ್ಯವೊಂದೆ ಅವರ ಬಂಡವಾಳ ಅಲ್ಲ. ಅಲ್ಲಿ ಮುಗ್ಧತೆ-ಪ್ರಬುದ್ಧತೆಗಳ ಮಿಡಿತವಿದೆ, ಕುತೂಹಲ-ಮನೋನಿಗ್ರಹ, ಪ್ರೀತಿ ವಾತ್ಸಲ್ಯದ ಸೆಳೆತವಿದೆ, ಚಾಂಚಲ್ಯ -ಧೃಢತೆಯ ಸಂಗಮವಿದೆ,ಕನಸು- ವಾಸ್ತವತೆಯ ಅರಿವಿದೆ.ನಾಜೂಕು-ನಯವಿದೆ. ನಗು-ಅಳುವಿನ ಹುಚ್ಚು ಹೊಳೆಯಿದೆ. ಚಾಣಾಕ್ಷತೆ-ಪೆದ್ದುತನ ಎರಡೂ ಸೇರಿಕೊಂಡಿದೆ. ಒಂಥರಾ dual nature. ಭೂಮಿಯ ಎರಡು ಧ್ರುವಗಳ ಸಂಗಮ. ಅಥವಾ ಎರಡು ವಿರುದ್ಧ ವ್ಯಕ್ತಿತ್ವಗಳ ಸಂಗಮ. ಈ ಹುಡುಗಿಯರ ಬಗ್ಗೆ ಜಗತ್ತಿನ ಜನರೆಲ್ಲಾ ಒಂದೊಂದು ಪ್ರಬಂಧ ಮಂಡಿಸಬಹುದೇನೋ. ಒಂದೊಂದು ಹುಡುಗಿಯೂ ಒಂದೊಂದು ಅದ್ಭುತ ಪ್ರಬಂಧಕ್ಕೆ ವಸ್ತುವಾಗಬಹುದು.

ಒಮ್ಮೆ ಒಬ್ಬ ಹುಡುಗ ತಪಸ್ಸಿಗೆ ಕುಳಿತನಂತೆ, ಬೆಂಗಳೂರಿನ ಅದ್ಯಾವ್ದೋ ಬಹುಮಹಡಿ ಕಟ್ಟಡದ ಬಳಿ. ಅಂತೂ ದೇವರು ಪ್ರತ್ಯಕ್ಷನಾಗಿಯೂ ಬಿಟ್ಟನಂತೆ, ದೇವರು ತನ್ನ ಮಾಮೂಲಿ ವರಸೆಯಲ್ಲಿ "ಅದೇನು ವರ ಬೇಕು ಕೇಳೋ ಹುಡುಗ "ಎಂದಾಗ, ಈ ಪುಣ್ಯಾತ್ಮ " ನನಗೆ ಬೆಂಗಳೂರಿನ traffic ನಿಂದ ಬಚಾವು ಮಾಡು " ಎಂದುಬಿಟ್ಟ. ಆಗ ದೇವರು " ಸಾಧ್ಯವಿಲ್ಲ. ಬೇರೆ ಕೇಳು " ಎಂದಾಗ ನಮ್ಮ ಹುಡುಗ "ನನ್ನ ಗರ್ಲ್ ಫ್ರೆಂಡ್ ಮನಸ್ಸನ್ನು ಸರಿಯಾಗಿ ಅರ್ಥ ಮಾಡಿಸು ಸಾಕು ಎಂದ." ಭಗವಂತ ಕಂಗಾಲಾಗಿ ಮೊದಲಿಗೆ ಕೇಳಿದ್ದನ್ನೇ ಮಾಡುತ್ತೇನೆ ಮಾರಾಯ ಎಂದು ಬೆಂಗಳೂರಿಗೆ 'Metro' ಕೊಟ್ಟ .! 'ಮೀನಿನ ಹೆಜ್ಜೆಯನ್ನಾದರೂ ಹುಡುಕಬಲ್ಲೆ, ಆದರೆ ಹುಡುಗಿಯರ ಮನಸನ್ನು ಅರಿಯಲಾರೆ ' ಎಂದು ಆ ಭಗವಂತನೇ ಹೇಳಿದ್ದನಂತೆ.

ಸಿನಿಮಾ ತಾರೆಯರನ್ನು ದೂರುತ್ತಲೇ ಅವರ ಅನುಕರಣೆ ಮಾಡುವುದು ಹುಡುಗಿಯರ ಮೂಲ ಗುಣದಲ್ಲೊಂದು. ಮೂಗುಬೊಟ್ಟು,ಹಾಗು ಕಾಲ್ಗೆಜ್ಜೆಗಳನ್ನು ಬಂಧನದ ಸಂಕೇತವೆಂದು ಕಿತ್ತೆಸೆದಿದ್ದ, ನನ್ನ ಸ್ನೇಹಿತೆಯೊಬ್ಬಳು.ಸಾನಿಯಾಳನ್ನು ನೋಡುತ್ತಲೇ,ಅವಳನ್ನು ಬಯ್ಯುತಲೇ ಅವಳ ಥರದ ಮೂಗುತಿಯನ್ನು ತನ್ನದಾಗಿಸಿಕೊಂಡಳು.

'ಹೆಣ್ಣಿಗೆ ಹೆಣ್ಣೇ ಶತ್ರು' ಎಂದು ಹಿರಿಯರು ಹೇಳಿರಬಹುದು. ಆದರೆ ಅದೇ ಹುಡುಗಿ ಒಬ್ಬ ಹುಡುಗನ ಆತ್ಮೀಯ ಸ್ನೇಹಿತೆಯಾಗಬಲ್ಲಳು. ಅವನನ್ನು ಒಬ್ಬ ಹುಡುಗನಿಗಿಂತ ಜಾಸ್ತಿಯಾಗಿ ಅರಿತುಕೊಳ್ಳಬಲ್ಲಳು.

ಹುಡುಗರ ವಿಷಯದಲ್ಲಾದರೆ ಒಮ್ಮೆ ವೈಮನಸ್ಸು ಬಂದು ಕಿತ್ತಾಡಿದರೆಂದರೆ ಆ ಸಂಬಂಧ ಅಲ್ಲಿಗೆ ಮುಗಿಯಿತೆಂತಲೇ ಅರ್ಥ. ಆದರೆ ಹುಡುಗಿಯರ ವಿಷಯದಲ್ಲಿ ಹಾಗೆ ಎಂದೂ ಯೋಚಿಸಬೇಡಿ. ಜಗಳವಾಡುತ್ತಲೇ ಆತ್ಮೀಯರಾಗಿಬಿಡುವ ಬೇತಾಳಗಳು ಈ ಹುಡುಗಿಯರು.! ಇಡೀ ದಿನ ಕಿತ್ತಾಡುವ ಹುಡುಗಿಯರೇ ಬಿಟ್ಟಿರದ ಸ್ನೇಹಿತೆಯರಾಗಿಬಿಡುತ್ತಾರೆ.!


ಸಾಮಾನ್ಯವಾಗಿ ಹುಡುಗರು ಧರಿಸುವ ಡ್ರಸ್ ಎನಿಸಿಕೊಂಡ pant, T-shirt, shirts ಅಲ್ಲದೆ, long skirts, mini skirts ಸಲ್ವಾರ್, ಸೀರೆ, ಇನ್ನೂ ಏನೇನೋ ಹೆಸರು ಇಲ್ಲದ ಉಡುಗೆಗಳು ಹುಡುಗಿಯರ ಸ್ವತ್ತು. ಅದೇ ಒಂದು ಹುಡುಗ ಸೀರೆ ಸುತ್ತಿಕೊಂಡು ಹೊರಟರೆ ಜನ ಏನೆಂದು ಆಡಿಕೊಳ್ಳುವರು ಎಂದು ನಿಮಗೆ ಗೊತ್ತೇ ಇದೇ ಅಲ್ವಾ?ಈ ಹುಡುಗಿಯರು ಏನೇ ಧರಿಸಿದರೂ ಅದೊಂದು ಹೊಸ ಫ್ಯಾಶನ್ ಆಗಿಬಿಡುತ್ತದೆ. !
ಹುಡುಗಿಯರ ನಾಜೂಕುತನ ಅವರಲ್ಲಷ್ಟೇ ಅಲ್ಲ, ಅವರ ನಡಿಗೆಯಲ್ಲಷ್ಟೇ ಅಲ್ಲ, ಅವರು ಸೆಲೆಕ್ಟ್ ಮಾಡುವ gift, ಕಾರ್ಡ್ ಗಳಲ್ಲಿಯೂ ಎದ್ದು ತೋರುತ್ತದೆ. ಅಲ್ಲೊಂದು uniqueness ಇರುತ್ತದೆ ಇದು ಹುಡುಗಿಯದ್ದೇ ಆಯ್ಕೆ ಎಂದು ತಿಳಿದೇ ಬಿಡುತ್ತದೆ.!

ಹುಡುಗಿ ಅಲಂಕಾರಪ್ರಿಯೆ. ಒಂದು ರೀತಿಯಲ್ಲಿ 'ಅಲಂಕಾರ' ಹುಡುಗಿಯರ ಮೂಲಭೂತ ಹಕ್ಕುಗಳಲ್ಲಿ ಒಂದು.!'ಅದಾವ ಕನ್ನಡಿಯೂ ಒಂದು ಹುಡುಗಿಯನ್ನು "ನೀ ಸುಂದರಿಯಲ್ಲ ಹುಡುಗಿ.." ಎಂದು ಹೇಳೇ ಇಲ್ಲವಂತೆ'. ಅದಕ್ಕೆ ಕನ್ನಡಿಯ ಮುಂದೆ ಚೂರು ಜಾಸ್ತಿ ಹೊತ್ತು ಕೂರುತ್ತಾರೆ.ಎಲ್ಲರ ಗಮನ ತನ್ನ ಮೇಲಿರಬೇಕು ಎನ್ನುವುದು ಹುಡುಗಿಯರ ಸಹಜ ತುಡಿತ. ಅದಕ್ಕೆಂದೇ ತನ್ನ ಇಷ್ಟದ ಜೊತೆಗೆ, ಪರರ ಮೆಚ್ಚುಗೆಯನ್ನು ಗಳಿಸಲು ತನ್ನ ತಾನು ಅಲಂಕರಿಸಿಕೊಳ್ಳುತ್ತಾರೆ. !

ಪಟಪಟನೆ ಮಾತನಾಡಿ ಮೊದಲ ನೋಟಕ್ಕೆ 'ವಾಚಾಳಿ','ಗಂಡು ಬೀರಿ' ಎನ್ನಿಸಿಕೊಳ್ಳುವ ಹುಡುಗಿಯರದು ಸಾಮಾನ್ಯವಾಗಿ ನಿಷ್ಕಲ್ಮಶ ಹೃದಯ. ತಣ್ಣಗಿರುವ, ಮೌನಿ ಹುಡುಗಿಯ ಧ್ಯಾನ ಎತ್ತ ಕಡೆಗಿದೆ ಎಂದು ಹೇಳುವುದು, ಯೋಚನಾ ಲಹರಿಯ ಜಾಡು ಹಿಡಿಯುವುದು ಭಾರಿ ಕಷ್ಟ.!

ಹುಡುಗರೇ ನಿಮಗೊಂದು ಕಿವಿಮಾತು ಅಪ್ಪಿ ತಪ್ಪಿಯೂ ನಿಮ್ಮ ಹುಡುಗಿಯ ಬಳಿ ಇನ್ನೊಬ್ಬ ಹುಡುಗಿಯನ್ನು ಹೊಗಳ ಬೇಡಿ. ಕೊನೆಗೆ film actressಗಳನ್ನೂ ಹೋಗಳಬೇಡಿ. ಹೊಗಳಿದಿರೋ ನಿಮಗೆ ಗ್ರಹಚಾರ ಕಾದಿದೆ ಎಂದೇ ಅರ್ಥ. ಅಸೂಯೆಯ ಕೋಳಿಯು ಅಲ್ಲೇ ಮೊಟ್ಟೆ ಇಟ್ಟೇ ಬಿಡುತ್ತದೆ. ಆ ದಿನವೇ ನಿಮ್ಮ ಹತ್ತಿರ ರಂಪಾಟ, ಜಗಳಾಟವಾಡಿ,ಮಾತು ಬಿಟ್ಟು ನಿಮ್ಮ ತಲೆ ಪೂರ್ತಿಯಾಗಿ ಕೆಟ್ಟು ಹೋಗುವಂತೆ ಮಾಡಿ ಬಿಡುತ್ತಾರೆ. ತನ್ನ ಮುಂದೆ ಪರ ಹುಡುಗಿಯ ಹೊಗಳಿಕೆಯನ್ನು ಅವರೆಂದೂ ಸಹಿಸರು. ಅವರ ಮುಂದೆ film actressಗಳನ್ನೋ,ಕಾಲೇಜಿನ beauty-queen ಗಳನ್ನೋ ತೆಗಳಿಬಿಡಿ, ನಿಮ್ಮ ಹುಡುಗಿ ಫುಲ್ ಖುಷ್ ಆಗದಿದ್ದರೆ ಹೇಳಿ.!
ಹುಟ್ಟಿದ ಮನೆಯ ಬೆಸುಗೆ, ಬಾಂಧವ್ಯಕ್ಕೆ , ಮರ್ಯಾದೆಗೆ ಬೆಲೆಕೊಟ್ಟು .. ಮನಸಾರೆ ಪ್ರೀತಿಸಿದ ಹುಡುಗನ ಬಿಟ್ಟು ಇನ್ನೊಬ್ಬನ ತಾಳಿಗೆ ಕೊರಳು ಒಡ್ಡಿಕೊಳ್ಳುವ ಹುಡುಗಿ ಆ ಕ್ಷಣಕ್ಕೆ cheat ಅಂತ ಅನಿಸಬಹುದು..
ಹುಡುಗರಲ್ಲಿ ಆಕಾಂಕ್ಷೆ , ಛಲ ಜಾಸ್ತಿ ಇದ್ರೆ .. ಹುಡುಗೀರು ತುಂಬಾ ಕನಸುಗಾರ್ತಿಯರು..ಭಾವನೆಗಳನ್ನು ಮೂಟೆಕಟ್ಟಿ , ಕನಸುಗಳಿಗೆ ಕೊಳ್ಳಿ ಇಟ್ಟು ಸಪ್ತಪದಿ ತುಳಿಯುವ ಹುಡುಗಿಯ ಮದುವೆಗೆ ಹೋಗಿಬನ್ನಿ ನಿಮಗೂ ಅರ್ಥ ಆಗತ್ತೆ.. ಪಕ್ಕದಲ್ಲಿ ಮುಂದಿನ ಜೀವನದ ಒಡೆಯ... ಎದುರಲ್ಲಿ ಮನದ ಪ್ರೀತಿಯನ್ನೆಲ್ಲಾ ಧಾರೆಯೆರೆದು ಪ್ರೀತಿಸಿಕೊಂಡ ಹುಡುಗ .. ಇದ್ರೆ..?!! ಜೀವನದ ಒಂದು ಹಂತದಲ್ಲಿ ಅವಳ ಗಂಡನಲ್ಲೂ ಒಂದು levelಗೆ ಅವಳ 'ಹುಡುಗನನ್ನ ' ಹುಡುಕೇ ಹುಡುಕುತ್ತಾಳೆ... !

ನಿಮ್ಮನ್ನ ಪ್ರೀತಿಸೋವಾಗ ನಿಮ್ಮ ಡಬಲ್ ಪ್ರೀತಿ ಕೊಟ್ಟಿರ್ತಾಳೆ .. ಅದ್ಕೆ ಅವಳು unforgetable ..!! ಅವಳಲ್ಲಿ ಪ್ರೀತಿಸೋ ಅಮ್ಮ ಇರ್ತಾಳೆ .. ಕಾಲೆಳೆಯೋ ತಂಗಿ ಇರ್ತಾಳೆ.. care ಮಾಡೋ ಅಕ್ಕ ಇರ್ತಾಳೆ .. ಬೇಕಾದಾಗ guide ಮಾಡೋ friend ಇರ್ತಾಳೆ ...ಅದ್ಕೆ ಬಿಟ್ಟು ಹೋಗ್ತಾಳೆ ಅನ್ನೋ ಭಯ ಇದ್ರೂ.. ಗೊತ್ತಿದ್ರೂ ನೀವು ಪ್ರೀತಿಸ್ಬಿಡ್ತೀರಾ ... ಅಲ್ವಾ???

ಹುಡುಗರಿಗಿಂತ ಮಾನಸಿಕವಾಗಿ ಹುಡುಗಿಯರೇ ಗಟ್ಟಿಗಿತ್ತಿಯರು, ಅಥವಾ ನಿಸರ್ಗ, ಅಥವಾ ಪರಿಸ್ಥಿತಿ ಅವರನ್ನು ಹಾಗೆ ಮಾಡಿದೆ. ಪ್ರೀತಿಸಿದ ಹುಡುಗನನ್ನು ಬಿಟ್ಟು ಇನ್ನೊಬ್ಬನ ಜೊತೆ ಹಾಯಾಗಿ ಹಿಂದಿನದೆಲ್ಲ ಮರೆತು (?) ಇದ್ದುಬಿಡುತ್ತಾರೆ. ಅಥವಾ ಎಂಥದ್ದೋ ಸನ್ನಿವೇಶಗಳನ್ನು ಮೆಟ್ಟಿ ನಿಲ್ಲುತ್ತಾರೆ. ಇದು ಅರಿವಾಗಿಯೇ ನಮ್ಮ ಯೋಗರಾಜ ಭಟ್ಟರು "ಹೆಣ್ಣಮಕ್ಳೆ ಸ್ಟ್ರಾಂಗು ಗುರು" ಅಂದು ಹೇಳಿದ್ದಿರಬೇಕು .!


ಓರ್ವ ಹುಡುಗಿಯನ್ನು ಆತ್ಮೀಯ ಸ್ನೇಹಿತೆಯಾಗಿ,ನಿಷ್ಕಲ್ಮಶ ಹೃದಯದಿಂದ ಪ್ರೀತಿಸಿ. ಆಗ ನಿಮಗೆ ನಿರ್ಮಲ ಸ್ನೇಹದ ಜೊತೆಗೆ, ಪ್ರೀತಿಯ ಉದ್ದಗಲಗಳ ದರ್ಶನವಾಗುತ್ತದೆ. ಜಗತ್ತಿನ ಜೀವಂತ ವಿಸ್ಮಯಗಳ ದರ್ಶನವಾಗುತ್ತದೆ.
!

No comments:

Post a Comment