Saturday, July 16, 2011

ಹನಿ ಹನಿ


ಭೂಮಿಯಲ್ಲಿನ ನೀರುಆವಿಯಾಗಿ, ಮೋಡವಾಗಿ ವಿಶ್ವಪರ್ಯಟನೆ ಕೈಗೊಂಡು,ತಂಪು ಸಿಕ್ಕಾಗ ಮಳೆ ಹನಿಯಾಗಿ ಭೂಮಿಗೆ ಮರಳುತ್ತದೆ. ಇದೆಲ್ಲ school daysನಲ್ಲೆ ಗೊತ್ತಿದೆ ಅಂತೀರಾ ? ಇಲ್ಲಿ ನಾನು ಆಮಳೆ ಹನಿಗಳಿಗೆ ಭಾವನೆಯನ್ನುಕೊಡಲು ಹೊರಟಿದ್ದೇನೆ . ....

ಕೆಲವು ಮಳೆಹನಿಗಳು ಸಮುದ್ರ, ನದಿಗಳಲ್ಲೇ ಬಿದ್ದು ಅಖಂಡ ಜಲರಾಶಿಯಲ್ಲಿ ಒಂದಾಗುತ್ತದೆ.ಹನಿ ಹನಿ ಕೂಡಿ ಹಳ್ಳ ಎಂದು ಹೇಳುತ್ತವೆ.ಇನ್ನು ಕೆಲವು ಗುಡ್ಡ, ಬೆಟ್ಟ, ಮಳೆ ಕಾಡುಗಳ ನಡುವೆಬಿದ್ದು ಒಂದಾಗಿ ಜಲಪಾತವಾಗಿ ಧುಮ್ಮಿಕ್ಕುತ್ತವೆ. . ಇನ್ನೂ ಕೆಲವು ಮಣ್ಣಲ್ಲಿ ಇಂಗಿಹೋಗುವ ಮೊದಲು, ನಮ್ಮ-ನಿಮ್ಮ ಮನೆಯ ಅಂಗಳದ ಹೂಗಿಡಗಳ ಮೇಲೆ, ಎಲೆಗಳ ಮೇಲೆ ಬಿದ್ದುನಲಿಯುತ್ತವೆ. ಒಣಗಲು ಹಾಕಿದ ಬಟ್ಟೆಯ ಮೇಲೆ ಬಿದ್ದು ಗೋಳು ಹೊಯ್ಸುತ್ತವೆ ಅಲ್ವಾ ? ಸೊಕ್ಕು,ಮುಗ್ಧತೆ, ಅಸಹಾಯಕತೆ , ಅಟ್ಟಹಾಸ, ಅಸೂಯೆ, ಎಲ್ಲ ಭಾವಗಳನ್ನು ಹೊರಸೂಸುವ ಈ ಮಳೆಹನಿಗಳು............
........

Friday, July 15, 2011

ಮೌನಂ ಸರ್ವತ್ರ ಸಾಧನಂ..............


ಮೌನ ಅತ್ಯಂತ ಉತ್ತಮ ಔಷಧಿ. ನಿಮ್ಮ ಭಾವೋದ್ವೇಗವನ್ನು ಮೌನ ಕ್ರಮಬದ್ದಗೊಳಿಸುತ್ತದೆ. ಏಕಾಂತದಲ್ಲಿ ನಿಮ್ಮನ್ನು ನೀವು ತೆಗೆದುಕೊಳ್ಳಿ. ಸರಿ ತಪ್ಪುಗಳ ಬಗ್ಗೆ ವಿಮರ್ಶೆ ಮಾಡಿ. ಮನಸ್ಸು ಎಷ್ಟು ವಿಶ್ರಾಂತಗೊಳ್ಳುತ್ತದೋ ಅಷ್ಟು ಬೇಗ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಮನಸ್ಸು ಗೊಂದಲದಲ್ಲಿರುವಾಗ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಉತ್ತಮ ಆಹಾರ ಸೇವಿಸಿ. ಕಣ್ಣುತುಂಬಾ ನಿದ್ರಿಸಿ. ಇಲ್ಲಿಗೆ ಅರ್ಧ ಸಮಸ್ಯೆ ನಿವಾರಣೆಯಾಗುತ್ತದೆ. ಪ್ರಕ್ಷುಬ್ಧ ಮನಸ್ಸು ಶಾಂತವಾಗುತ್ತದೆ. ಆದರೆ ನಿದ್ದೆಗೆಂದು ಆಲ್ಕೋಹಾಲ್, ನಿದ್ದೆ ಮಾತ್ರೆಗಳ ಮೊರೆ ಹೋಗದಿರಿ. ಮನಸ್ಸು ಇನ್ನಷ್ಟು ವ್ಯಗ್ರಗೊಳ್ಳುತ್ತದೆ.
ಮಾತಿಗಿಂತ ಹೆಚ್ಚಿನದನ್ನು ಮೌನ ಹೇಳುತ್ತದೆ. ಇಲ್ಲಿ ಮೌನ ಮಾತನಾಡುತ್ತದೆ. ಭೀಕರವಾದುದನ್ನು, ಆಶ್ಚರ್ಯವಾದುದನ್ನು ಸಮರ್ಥವಾಗಿ ಹೇಳುವುದೆಂದರೆ ಅದು ಮೌನ. ಮಾತಲ್ಲ. ಇದರಿಂದ ಏನು ಹೇಳಲು ಸಾಧ್ಯವಾಯಿತು ಮೌನವೊಂದಿದ್ದರೆ ಸಾಕಲ್ಲವೆ?.

ಸ್ನೇಹದ ಅಲೆಗಳಲ್ಲಿ


ಈ freinds ಅನ್ನೋ ಜೀವಿಗಳೇ ವಿಚಿತ್ರ..!Friendship ಬೆಳೆಯೋ ರೀತಿ ಇನ್ನೂ ವಿಚಿತ್ರ ..!ರಕ್ತ ಸಂಬಂಧದ ವಯ್ಯಾರವಿಲ್ಲದೆ,ಜಾತಿ,ಮತ ,ಧರ್ಮ,ದೇಶ, ಭಾಷೆ ಇವೆಲ್ಲವುಗಳ ಬೇಲಿಯನ್ನು ದಾಟಿ ಹಬ್ಬಿ ಬೆಳೆಯೋ ಬಳ್ಳಿ ಈ 'ಸ್ನೇಹ' !.ಅಣ್ಣ ತಮ್ಮಂದಿರು ದಾಯಾದಿಗಳಾಗಬಹುದು,ಜೀವದಂತೆ ಪ್ರೀತಿಸಿದ ಹುಡುಗ /ಹುಡುಗಿ ದೂರವಾಗಬಹುದು ಆದರೆ 'Friends' ಮಾತ್ರ ಯಾವತ್ತು Friends .! .True friends ಅನಿಸಿಕೊಂಡಿರ್ತಾರಲ್ವಾ? ಅವ್ರು ನಿಮ್ಮ ಹುಡುಗ/girl friendಗಿಂತ ಜಾಸ್ತಿ ಪ್ರೀತಿಸಿರ್ತಾರೆ ! ನಮ್ಮ ಬಗ್ಗೆ posessive ಆಗಿರ್ತಾರೆ, ಅಕ್ಕ ತಂಗಿಯರಿಗಿಂತ ಜಾಸ್ತಿ ಕಾಡ್ತಾರೆ, ಅಣ್ಣ ತಮ್ಮಂದಿರ ಥರ ಜಗಳ ಆಡ್ತಾರೆ, ಅಪ್ಪನ ಥರ guide ಮಾಡ್ತಾರೆ ,ಎಲ್ಲೋ ಒಂದು ಹತಾಶ ಗಳಿಗೆಯಲ್ಲಿ ಅವರ ಮಡಿಲಲ್ಲೋ ,ಭುಜದ ಮೇಲೋ ತಲೆಯಿಟ್ಟು ಮಲಗಿದಾಗ ಅಮ್ಮನ ಥರ ಅನಿಸಿದರೂ ಅದ್ರಲ್ಲಿ ಆಶ್ಚರ್ಯವಿಲ್ಲ .!
ಅದೇ ಸ್ನೇಹಿತರು ನಿಮ್ಮನ್ನ ಒಂದು depression ನಿಂದ ಎತ್ತಿರ್ತಾರೆ , 'ನನಗೆ ಆಗೊಲ್ಲ' ಎಂದು ಕುಸಿದು ಕುಳಿತ ಘಳಿಗೆಯಲ್ಲಿ ಆತ್ಮವಿಶ್ವಾಸವನ್ನು ತುಂಬಿ 'ನಿನಗೆ ಆಗುತ್ತೆ ಮಾಡು'ಎಂದು ಹೇಳ್ತಾರೆ . ಅಂಥಾ ಸ್ನೇಹಿತರು ಜೀವನದ ಯಾವುದೋ ಒಂದು ತಿರುವಿನಲ್ಲಿ ಕಳೆದುಹೋಗ್ತಾರೆ ಅಲ್ವಾ? ಎಲ್ಲೋ ಒಂದು ದಿನ ಫಕ್ಕನೆ ನೆನಪಾಗ್ತಾರೆ ..! ಅವರೊಂದಿಗೆ ಗಂಟೆಗಟ್ಟಲೆ ಹರಟಿದ ಘಳಿಗೆ ,, ಅಡ್ಡಹೆಸರು , ಯಾವುಒದೋ ಒಂದು ಪ್ರವಾಸ, ಅವರೊಂದಿಗೆ ಕುಡಿದ ಬೈ-ಟು ಜ್ಯೂಸ್, ಕೊನೆಗೆ ಮಿಸ್ ಮಾಡೋದು ? ನಮ್ಮ ಜೀವನದಲ್ಲಿ ಯಾರೋ ಒಂದು ಹೊಸ ವ್ಯಕ್ತಿಯ ಆಗಮನವಾದಾಗ ಗೆಳೆಯರನ್ನು ಮರೆತಿರ್ತೇವೆ ಅಥವಾ ಒಂದು ಜಗಳ, ಭಿನ್ನಾಭಿಪ್ರಾಯಕ್ಕೆ ಅದ್ಭುತ ಸ್ನೇಹಿತರನ್ನ ಕಳೆದುಕೊಂಡಿರ್ತೇವೆ . ಆ ಕ್ಷಣಕ್ಕೆ ಮನಸು ಅವರನ್ನು ಕ್ಷಮಿಸಿಯೇ ಇರುವುದಿಲ್ಲ .ಸ್ನೇಹದ ಸೇತುವೆ ಸದ್ದಿಲ್ಲದೇ ಮುರಿದು ಬಿದ್ದಿರುತ್ತದೆ . ನಮ್ಮ ego,attitudeಗಳ ನಡುವೆ ಸ್ನೇಹದ ಹೂವು ಬಾಡಿರುತ್ತದೆ .
Dear friends ನಿಮ್ಮ ಜೀವನದಲ್ಲೂ ಇಂಥ ಘಟನೆಗಳು ಆಗಿದ್ದಿರಬಹುದು ಅಥವಾ ಮುಂದೆ ಆಗಲೂಬಹುದು..ಗೆಳೆಯರನು ಅವರ ಸಣ್ಣ ತಪ್ಪುಗಳಿಗೆ ಕಣ್ಮುಚ್ಚಿ ಕ್ಷಮಿಸಿಬಿಡಿ. ಯಾಕೆಂದ್ರೆ life is too short .! ಈ ಭೂಮಿಯಲ್ಲಿ ಮಾನವರಾಗಿ ಹುಟ್ಟಿದ್ದೇವೆ. ಹೃದಯಗಳನ್ನು ಗೆಲ್ಲೋಣ ,ಸ್ನೇಹ ಪ್ರೀತಿಗಳನ್ನು ಹರಡೋಣ.. ನಾಳೆ ಎಂಬುದು ಯಾರಿಗೆ ಗೊತ್ತು ? ಬಂದಾಗಲೇ ನಿಜ ಅಲ್ವಾ?

Wednesday, July 13, 2011

ಕನಸು




ಕಣ್ಮುಚ್ಚಿ ಮಲಗಿದರೆ ಸಾಕು
ನಿದ್ರಾದೇವತೆ ಕನಸುಗಳ
ಜಾತ್ರೆಗೆ ಕರೆದೊಯ್ಯುವಳು ನನ್ನ,
ಕನಸುಗಳೆಂದರೇನು
ಸುಮ್ಮನೆಯೇ????
ಕೆಲವು ರಂಗು ರಂರಿನವಾದರೆ
ಕೆಲವು ಕಪ್ಪು-ಬಿಳುಪಿನವು
ಕಣ್ಣಕವಡೆಗೆ ಮಿಟುಕುವ
ನೂರಾರು ಕನಸುಗಳು
ನನ್ನನ್ನೇ
ನೋಡುತ್ತಿದ್ದವು!!!!!
ಕೆಲವು ಪರಿಚಿತವದುವಾದರೆ
ಇನ್ನೂ ಕೆಲವು ಅಪರಿಚಿತವಾದುವು
ನಾನು ಅವರೆಡೆ ಹೋಗುವಾಗ
ದೋಪ್ಪೆಂದು ಬಿದ್ದೆ
ಮೇಲೆದ್ದು ನೋಡುದಾಗ
ಮಂಚದ ಮೇಲಿಂದ ಬಿದ್ದಿದ್ದೆ........

Tuesday, July 12, 2011


ತಾಯಿಯ ಮಮತೆ
ತಂದೆಯ ವಾತ್ಸಲ್ಯ
ಗುರುವಿನ ಕಕ್ಕುಲತೆ
ಹಿರಿಯರ ಹಾರೈಕೆ
ಕಿರಿಯರ ವಾಂಛಲ್ಯ
ಎಲ್ಲವೂ ಪ್ರೀತಿಯ ರೀತಿಗಳಾದರೆ
ಪ್ರೀತಿಯೆಂದರೇನು?

ಹೆತ್ತವರಿಗೆ ಗೌರವ
ಗುರುಗಳಿಗೆ ಭಕ್ತಿ
ಹಿರಿಯರಿಗೆ ಮರ್ಯಾದೆ
ಕಿರಿಯರಿಗೆ ಅಕ್ಕರೆ
ಗೆಳೆಯರಿಗೆ ಸ್ನೇಹ
ಎಲ್ಲವೂ ಪ್ರೀತಿಯ ಅಭಿವ್ಯಕ್ತಿಗಳಾದರೆ
ಪ್ರೀತಿಯೆಂದರೇನು?

ಕರುಳಿನ ಕರೆ
ಮನಸಿನ ಆನಂದ
ಹೃದಯದ ಮಿಡಿತ
ಕಣ್ಣಿನ ಮಿಂಚು
ತುಟಿಯ ಮುಗುಳ್ನಗು
ಎಲ್ಲವೂ ಪ್ರೀತಿಯ ಮುಖಗಳಾದರೆ
ಪ್ರೀತಿಯೆಂದರೇನು?

Sunday, July 10, 2011

ನನ್ನೆದೆಯ ಮಾತು




ನನ್ನೆದೆಯ ಮಾತು ಇದೆ
ಅಮ್ಮ ಕಲಿಸಿದ ಹಾಡು ಇದೆ
ಆಹಾಡಿನ ತೋಟದಲಿ
ನೀವು ಬೆಳೆಸಿದ ಹೂವು ಇದೆ....
ಈ ಹೃದಯ ಬಯಸುವುದು ಪ್ರೀತಿಸುವ ಹೃದಯವನ್ನು..! ಎಂದು ಮುದ್ದಾದ ಅಕ್ಷರಗಳಲ್ಲಿ ಬರೆದುಬಿಟ್ಟು,ಅಮ್ಮನೊಂದಿಗೆ ಮುನಿಸಿಕೊಂಡು ಮನಸ್ಸು ಭಾರವಾದಗ,ಹಳೇ ನೆನಪುಗಳು ನನ್ನ ಕಾಡಿದಾಗ, ಮನೆಯಲ್ಲಿ ಅಣ್ಣಂದಿರ ಜೊತೆ ರಚ್ಚೆ ಹಿಡಿದು ಬೈಸಿಕೊಂಡು ಮೌನಕ್ಕೆ ಶರಣಾದಾಗ, ಪವರ್ ಕಟ್ ಆಗಿ ಮನೆಯೊಳಗೆ ದೀಪ ಉರಿಸಿ ಕುಳಿತಿದ್ದಂತೆ ನನ್ನ ಚಿಂದಿ ಚಿತ್ರನ್ನವಾಗಿರುವ ಆ ನೆನಪಿನ ಹೊತ್ತಗೆಯ ಪುಟಗಳನ್ನು ಮತ್ತೆ ಜೋಡಿಸುತ್ತಾ...ನೋಡುವ ಆಸೆ ನನ್ನದು.
ನನ್ನ ತುಂಬಾ ಪ್ರೀತಿಸುವ ನನ್ನ ಅಪ್ಪ, ಅಮ್ಮ ಮತ್ತು ನನ್ನ ಅಣ್ಣಂದಿರು, ಅಕ್ಕ ಎಂದು ಹಿಂಬಾಲಿಸುವ ನನ್ನ ಮುದ್ದಿನ ತಮ್ಮ ನನ್ನೆಲ್ಲಾ ಕನಸುಗಳಿಗೆ ಜೀವ ತುಂಬುತ್ತಾ ಬರುವ ಪ್ರೀತಿಯ ಸರ್ ಇವರೆಲ್ಲ ಸಿಕ್ಕಿದ್ದು ನನ್ನ ಅದೃಷ್ಟ .
'ಸವಿನೆನಪುಗಳು ಸಾವಿರವಿದ್ದರೂ ಮನದೊಳಗೆ ನಿನಗೊಂದು ಮನೆಯಿದೆ ಗೆಳತೀ.' ಎಂದು ಸವಿಸವಿ ಮಾತುಗಳನ್ನು ಗೀಚಿದ ಸ್ನೇಹಿತೆಯರು, ನಿತ್ಯ ಅಕ್ಕಾ..ಅಕ್ಕಾ..ಎಂದು ಹಿಂಬಾಲಿಸುವ ನನ್ನ ತಮ್ಮನ ಎಂಥೆಂಥ ಸವಿನುಡಿಗಳು..