Friday, July 15, 2011

ಮೌನಂ ಸರ್ವತ್ರ ಸಾಧನಂ..............


ಮೌನ ಅತ್ಯಂತ ಉತ್ತಮ ಔಷಧಿ. ನಿಮ್ಮ ಭಾವೋದ್ವೇಗವನ್ನು ಮೌನ ಕ್ರಮಬದ್ದಗೊಳಿಸುತ್ತದೆ. ಏಕಾಂತದಲ್ಲಿ ನಿಮ್ಮನ್ನು ನೀವು ತೆಗೆದುಕೊಳ್ಳಿ. ಸರಿ ತಪ್ಪುಗಳ ಬಗ್ಗೆ ವಿಮರ್ಶೆ ಮಾಡಿ. ಮನಸ್ಸು ಎಷ್ಟು ವಿಶ್ರಾಂತಗೊಳ್ಳುತ್ತದೋ ಅಷ್ಟು ಬೇಗ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಮನಸ್ಸು ಗೊಂದಲದಲ್ಲಿರುವಾಗ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಉತ್ತಮ ಆಹಾರ ಸೇವಿಸಿ. ಕಣ್ಣುತುಂಬಾ ನಿದ್ರಿಸಿ. ಇಲ್ಲಿಗೆ ಅರ್ಧ ಸಮಸ್ಯೆ ನಿವಾರಣೆಯಾಗುತ್ತದೆ. ಪ್ರಕ್ಷುಬ್ಧ ಮನಸ್ಸು ಶಾಂತವಾಗುತ್ತದೆ. ಆದರೆ ನಿದ್ದೆಗೆಂದು ಆಲ್ಕೋಹಾಲ್, ನಿದ್ದೆ ಮಾತ್ರೆಗಳ ಮೊರೆ ಹೋಗದಿರಿ. ಮನಸ್ಸು ಇನ್ನಷ್ಟು ವ್ಯಗ್ರಗೊಳ್ಳುತ್ತದೆ.
ಮಾತಿಗಿಂತ ಹೆಚ್ಚಿನದನ್ನು ಮೌನ ಹೇಳುತ್ತದೆ. ಇಲ್ಲಿ ಮೌನ ಮಾತನಾಡುತ್ತದೆ. ಭೀಕರವಾದುದನ್ನು, ಆಶ್ಚರ್ಯವಾದುದನ್ನು ಸಮರ್ಥವಾಗಿ ಹೇಳುವುದೆಂದರೆ ಅದು ಮೌನ. ಮಾತಲ್ಲ. ಇದರಿಂದ ಏನು ಹೇಳಲು ಸಾಧ್ಯವಾಯಿತು ಮೌನವೊಂದಿದ್ದರೆ ಸಾಕಲ್ಲವೆ?.

No comments:

Post a Comment