Thursday, November 24, 2011

ಯಾರು ನೀವು.........




ನನ್ನ ಜೀವದ ಸ್ಪೂರ್ತಿ ನೀವು,

ನನ್ನ ಚೈತನ್ಯದ ಚಿಲುಮೆ ನೀವು,

ನನ್ನ ಮೊಗದ ನಗುವಿನ ನಗು ನೀವು,

ನನ್ನ ಎಲ್ಲ ಭಾವನೆಗಳ ಭಾವಗಳ ಮೇರುಗು ನೀವು,

ನನ್ನ ಖುಷಿಯ ಸಂಕೇತ ನೀವು,

ನನ್ನ ವಿಜಯದ ಸಂಭ್ರಮದ ಭಾಗ ನೀವು,

ನನ್ನ ಜೀವನದ ಜೀವದ ಗೆಳಯ ನೀವು

ನನ್ನ ಉಸಿರಾಟದ ಉಸಿರು ನೀವು,

ನನ್ನ ಪ್ರತಿಯೊಂದು ಕಾರ್ಯಕ್ಕೂ ಕಾರಣ ನೀವು,

ನನ್ನ ಏಳಿಗೆಯ ಎತ್ತರದ ಎಣಿ ನೀವು,

ನನ್ನಲ್ಲಿ ನಾನಿಲ್ಲದಿದ್ದಾಗ ನೀವಾದೆ ನಾನು,

ನೀವೇ ನಾನಾದರೆ ಆಗ ನೀವು ಯಾರು????????????????

Wednesday, November 16, 2011

ನಿಮಗಾಗಿ


ಬಾಳ ಪಯಣದಲಿ

ಮೋಹದ ಮದದಲಿ

ಪ್ರೀತಿಯ ಹೊಳೆಗೆ

ತಡೆಗೋಡೆ ಕಟ್ಟಿ ಮರೆಯದೆಯಲ್ಲಾ........

ಶಬರಿ ರಾಮನಿಗಾಗಿ ಕಾದಿರುವಂತೆ

ನಾನೂ ಕಾಯುವೆ ಗೆಳೆಯಾ........

ನಿಮ್ಮ ತಪ್ಪು ನಿಮಗೆ ಅರಿವಾಗುವ ತನಕ

ನನ್ನ ಪ್ರೀತಿಯ ನಿಜ ಅರ್ಥ ನಿಮಗೆ ತಿಳಿಯುವ ತನಕ

ಪ್ರೀತಿ ತಡೆಗೋಡೆ ಒಡೆಯುವ ತನಕ

ದಿನವಾದರೂ ಸರಿಯೇ

ನಿಮಗಾಗಿ ಕಾದಿರುವೆ..........

Wednesday, November 9, 2011

ನಿಮ್ಮ ಪ್ರೀತಿಗಾಗಿ


ನಿಮ್ಮ ಸಣ್ಣ ಮುಗುಳು ನಗೆಯಲ್ಲಿ

ಪ್ರೀತಿಯನ್ನು ನೋಡಲು ಕಲಿತ ಈ ಮನ,

ಅದರ ಹಿಂದಿದ್ದ ನೋವನ್ನು

ಸಹಿಸಿಕೊಳ್ಳಲು ಏಕೆ ಕಲಿಯಲಿಲ್ಲ???

ನನ್ನನ್ನೇ ನಾನು ಮರೆಯುವಷ್ಟು

ನಿಮ್ಮ ಪ್ರೀತಿಸಲು ಕಲಿತ ಈ ಹೃದಯ,

ನಿಮ್ಮ ಮರೆಯುವ ಕನಸನ್ನೂ ಏಕೆ ಕಾಣಲಿಲ್ಲ???

ಈ ನ್ನನ್ನೆಲ್ಲ ಹುಚ್ಚು ಪ್ರಶ್ನೆಗಳಿಗೆ

ನೀವೆಂದು ಉತ್ತರಿಸುವುದಿಲ್ಲ ಎಂದು ತಿಳಿದಿದ್ದರೂ,

ನಿಮ್ಮ ಆ ಮೌನ ದಲ್ಲೇ ನನ್ನ ಒಲವನ್ನು

ನಿರೀಕ್ಷಿಸುತ್ತಾ ಪ್ರಶ್ನೇಯನ್ನೇ ಏಕೆ ಮರೆತೆ???

ಏಕೆಂದರೆ ನನಸಾಗದ ಕನಸಿಗೆ

ಹಗಲಲ್ಲೂ ಕನಸು ಕಾಣುತ್ತಿರುವ ಪೇದ್ದಿ ನಾನು................