Wednesday, April 17, 2013


ಅಮ್ಮ ನಿನ್ನ ಮರೆಯದಂತೆ ನನ್ನೊಮ್ಮೆ ಅರಸು ತಾಯೇ
ನಿನ್ನ ನೆನೆಪಿನಿಂದ ಎನಿತು ಧನ್ಯವೋ
ಎನಿತು ಧನ್ಯವೋ

ಇರುಳೊಂದು ಹಗಲು ಮಾಡಿ ದುಡಿದು ದಣಿದ ನಿನ್ನಾ
ಬೆವರ ಬೆಲೆಗೆ ಯಾವ ಸಿರಿಯು ಸಾಟಿ
ನೀನೇ ದೇವರು
ನೀನೇ ದೇವರು...........
ಅಮ್ಮ ನಿನ್ನ ಮರೆಯದಂತೆ ನನ್ನೊಮ್ಮೆ ಅರಸು ತಾಯೇ

ದೊರೆಯಾದರೇನು ಧರೆಗೆ ತಾಯಿಗವನು ಮಗುವು ತಾನೇ?
ತೊರೆಯಬಾರದ ಅವಳ ನೆನಪ ಮನುಜ ಮನಗಳು............
ಅಮ್ಮ ನಿನ್ನ ಮರೆಯದಂತೆ ನನ್ನೊಮ್ಮೆ ಅರಸು ತಾಯೇ

ತಾಯಿ ಋಣ ತೀರಲು ಜಾಣತನದ ಮಾತಿನಲ್ಲಿ
ಜನುಮ ನೂರು ಸಾಲದಮ್ಮ
ನಿನ್ನ ಜಪಿಸಲು.......
ಅಮ್ಮ ನಿನ್ನ ಮರೆಯದಂತೆ ನನ್ನೊಮ್ಮೆ ಅರಸು ತಾಯೇ

ನಿನ್ನ ನೆನೆಪಿನಿಂದ ಎನಿತು ಧನ್ಯವೋ

ಎನಿತು ಧನ್ಯವೋ............................

No comments:

Post a Comment