Thursday, October 28, 2010

ಮರೆಯದ ನೆನಪುಗಳು


ನಿನ್ನೆ ನನ್ನ ರೂಮ್ clean ಮಾಡ್ತಾ ಇದ್ದೆ . ಕಣ್ಣು albumಗಳ ಸಾಲಿನತ್ತ ಹಾಯಿತು . ಯಾಕೋ ನನ್ನ ಬಾಲ್ಯದ ಫೋಟೋಗಳನ್ನು ನೋಡಬೇಕು ಅನಿಸಿತು. album ತೆರೆದು ನೋಡತೊಡಗಿದೆ . ಅದೆಷ್ಟು ಮುದ್ದಾಗಿದ್ದೆ ನಾನು ..! ನೋಡಿದ ತಕ್ಷಣವೇ ಎಲ್ಲರೂ ನನ್ನ -ಬಾಲ್ಯದ ನೆನಪಾಯಿತು..! ಹಾಗೇ ಪುಟಗಳನ್ನೂ ತಿರುವುತ್ತಿದ್ದ ನಾನು, ಒಂದು ಕಡೆ ನಿಂತುಬಿಟ್ಟಿದ್ದೆ . ಆ ಫೋಟೋದಲ್ಲಿ ನನ್ನ ಕೈಯಲ್ಲಿದ್ದ ಗೊಂಬೆಗಳು ನನ್ನನ್ನು ಸೆಳೆದಿದ್ದವು ನಾನು ಅವುಗಳಿಗೆ.ಪುಟ್ಟದಾದ ಅಂಗಿ ತೊಡಿಸಿದ್ದೆ ಕಪ್ಪನೆಯ ಒಂದು ಜುಟ್ಟು ಇದ್ದು ,ಲಕ್ಷಣವಾಗಿದ್ದ ಪುಟ್ಟ ಹೆಣ್ಣು ಗೊಂಬೆಗಳು ಅವು . .! ಫೋಟೋದಲ್ಲಿ ನನ್ನ ಪುಟ್ಟ ಕೈಗಳಲ್ಲಿ ಕಂಗೊಳಿಸುತ್ತಿದ್ದವು .


ಹೆಚ್ಚಾಗಿ ಹೆಣ್ಣುಮಕ್ಕಳು ತಮ್ಮ ಬಾಲ್ಯದಲ್ಲಿ ಗೊಂಬೆಗಳ ಜೊತೆ ಆಡುವುದನ್ನು ಹಾಗೂ ಅಡುಗೆ ಆಟವನ್ನು ಇಷ್ಟ ಪಡುತ್ತಾರೆ ಇದನ್ನು ನೀವೂ ನೋಡಿರಬಹುದು. ಒಂದು ಮಗು ಅನುಕರಣೆಯ ಮೂಲಕವೇ ಎಲ್ಲವನ್ನು ಕಲಿಯುವುದಲ್ಲವೇ ? ಹೆಣ್ಣು ಮಗುವಿಗೆ ತನ್ನ ಹಾಗೇ ಇರುವ ಅಮ್ಮ role model ಆಗಿ ಬಿಡುತ್ತಾರೆ. ಅವರನ್ನೇ ಅನುಕರಿಸುತ್ತದೆ ಅದು . ಅಮ್ಮ ಅಡುಗೆಮನೆಯಲ್ಲಿ ಅಡುಗೆಮಾಡುವುದನ್ನು, ಪುಟ್ಟ ಪಾಪುವನ್ನು ಮಲಗಿಸುವುದನ್ನು ನೋಡುತ್ತಾ ಹೆಣ್ಣು ಮಗು ಅದರದೇಜಗತ್ತಿನಲ್ಲಿ,ಅದರದೇ ಆದ ರೀತಿಯಲ್ಲಿ ಅಮ್ಮನನ್ನು ಅನುಕರಿಸುತ್ತದೆ . ಅಮ್ಮ ತನ್ನ ಉದ್ದನೆಯ ಜಡೆಗೆ ಮೊಳ ಉದ್ದದ ಹೂ ಮಾಲೆ ಮುಡಿದರೆ, ತನ್ನ ಬಾಬ್ ಕೂದಲಿಗೂ ಅಷ್ಟೇ ಉದ್ದದ ಹೂ ಬೇಕೆಂದು ಹಠ ಮಾಡುತ್ತಿದ್ದೆ. ಗೊಂಬೆಗಳನ್ನು ಮಗುವಿನ ತರಹ ಜೋಪಾನ ಮಾಡುತ್ತದೆ . ಆ ಹೆಣ್ಣು ಮಗು ಆ ಗೊಂಬೆಗೆ ಪುಟ್ಟ ಅಮ್ಮನೇ ಆಗಿಬಿಡುತ್ತಿದ್ದೆ.


ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೇನೆ ಗೊತ್ತಾ ? ನಾನು ನನ್ನ ಬಾಲ್ಯದಲ್ಲಿ (ಸುಮಾರು 3-7ತರಗತಿಯವರೆಗೂ ) ಗೊಂಬೆಗಳ ಜೊತೆ ಆಡಿದ್ದೆ, ಅವುಗಳಿಗೆ ಊಟ ಮಾಡಿಸಿದ್ದೆ, ಸ್ನಾನ ಮಾಡಿಸಿದ್ದೆ ಮಲಗಿಸಿದ್ದೆ . ಹೂ ಮುಡಿಯಲು ಅಮ್ಮನೊಂದಿಗೆ ಜಗಳವಾಡಿದ್ದೆ . ಗೊಂಬೆಗೂ ಹೂ ಮುಡಿಸಿದ್ದೆ, ಅವುಗಳೊಂದಿಗೆಮಾತನಾಡಿದ್ದೆ. ನನ್ನದೇ ಲೋಕದಲ್ಲಿ ಆ 'ನಿರ್ಜೀವ ಗೊಂಬೆಗಳ ಜೊತೆ ಜೀವಂತ ಗೊಂಬೆ ನಾನಾಗಿದ್ದೆ ..!' ಒಟ್ಟಿನಲ್ಲಿ ಅವು ನನ್ನ ನೆಚ್ಚಿನ ಗೊಂಬೆಗಳಾಗಿದ್ದವು. ಮೌನವಾಗಿ ನನ್ನ ಜೊತೆಸಂಭಾಷಿಸುತ್ತಿದ್ದವು.


ಮತ್ತೆ ನಿನ್ನೆ ಯಾಕೋ ನೆನಪಾಗಿ ಕಾಡಿದ್ದವು . ಆಲ್ಬಮ್ ತೆಗೆದಿಟ್ಟು ಸೀದಾ ಅಮ್ಮನ ಬಳಿ ಓಡಿದ್ದೆ "ಅಮ್ಮ, ನನ್ನತ್ರ ಎರಡು ಜುಟ್ಟು ಗೊಂಬೆ ಇದ್ದಿತ್ತು ನೆನಪಿದ್ದಾ ?" ಎಂದೆ . ಹಾ ನೆನಪಿದೆ ಎಂಬುದು ಅಮ್ಮನ reply.ನಾನು ಮುಂದುವರೆದು "ಈಗ ಸಿಗುತ್ತಾ ಅದು? ನನಗೆ ಬೇಕಾಗಿತ್ತು " ಎಂದು ಕೇಳಿದ್ದೆ. ಅಮ್ಮ ನಕ್ಕು "ಸಿಗುತ್ತೆ ಜಾತ್ರೇಲಿ, ಕೇಳಿ ನೋಡು " ಎಂದರು . ನಾನು ಆ ಗೊಂಬೆಗಾಗಿ ಎಲ್ಲ fancy ಅಂಗಡಿಗಳನ್ನು ಕೇಳಿದ್ದೆ . ಎಲ್ಲ ಕಡೆ ಹೊನ್ನ ಕೂದಲ ಗೊಂಬೆಗಳದ್ದೇ ಕಾರುಬಾರು . ಅದು ಬಿಟ್ಟರೆ sexy lookನ ಬಾರ್ಬಿ ಗೊಂಬೆಗಳು, teddy bear ಗಳು. ಯಾವುದೂ ಇಷ್ಟ ಆಗಲೇ ಇಲ್ಲ. ಅದೆಲ್ಲ ಚಿಕ್ಕ ಮಕ್ಕಳು ಆಡೋದು ಅನಿಸಿ ಬಿಡ್ತು . ನನ್ನ ಕಂಗಳು ನನ್ನ 'ಜುಟ್ಟು ಗೊಂಬೆಯನ್ನು ' ಹುಡುಕುತ್ತಿದ್ದವು.ಎಲ್ಲೋ ಸಿಗಲೇ ಇಲ್ಲ . ಸಿಗಬಹುದೆಂಬ ಆಸೆಯಿಂದ ಎಲ್ಲ ಕಡೆ ಸುತ್ತಾಡಿದೆ ಆದರೂ ಆ ಗೊಂಬೆಗಳು ನನಗೆ ಸಿಗಲೇ ಇಲ್ಲ ಅದರ ನೆನಪು ಇಂದೂ ನನ್ನ ಕಾಡಿತ್ತು . ೆಲ್ಲಾದರೂ ಆ ಗೊಂಬೆಗಳನ್ನು ನೋಡಿದರೆ ಮರೆಯದೆಆ ತಿಳಿಸಿ. ತಿಳಿಸಿತ್ತೀರಾ ಅಲ್ಲವಾ?.


2 comments:

  1. @ಪೂರ್ಣಿಮಾ,
    ನಿಮ್ಮ ಬರಹ ಚೆನ್ನಾಗಿದೆ, ನಿಮಗೆ ಏನು ಅನಿಸುತ್ತೋ ಅದನ್ನೆಲ್ಲ ಬರೀರಿ ಚೆನ್ನಾಗಿರುತ್ತೆ. ಬರೀತಾ ಬರೀತಾ ಒಂದು ಒಳ್ಳೆ ಓದು ನಮಗೂ ಸಿಗುತ್ತೆ ಅಲ್ವಾ?

    ReplyDelete
  2. ಧನ್ಯಾವಾದಗಳು ನಿಮ್ಮ ಪ್ರೋತ್ಸಾಹಕ್ಕೆ.

    ReplyDelete